Pages

Saturday, October 20, 2012

ಅಸ್ತಿತ್ವ ೧.


ಕನ್ನಡಿಯ ಎದುರು ನಿಂತವನೇ
ಗಾಬರಿಯಲ್ಲಿ ಮುದುಡಿಹೋದೆ!
ಕನ್ನಡಿಯ ಒಳಗೆ ಸಾವಿರ ಮುಖಗಳು

ಆ ಗೋಳಾಡುವ, ಸಿಡುಕುವ,
"ಛೀ! ಥೂ!" ಎನ್ನುವ
ಆಪ್ತ ಮುಖಗಳೆಲ್ಲ
ಮುಚ್ಚಿಹೋದ ಭೂತಕಾಲದ
ಹೊಗೆಯ ಸಾಕ್ಷಿಗಳೊಡನೆ
ನೀಚನನ್ನಾಗಿಸಿ, ಖಾಲಿ ಕೋರ್ಟಿನ
ಕಟೆಕಟೆಗೆ ತಳ್ಳಿ...

ಕಟೆಕಟೆಯ ಕಂಬಗಳಿಗೆ
ರೆಂಬೆ ಬಂದು, ಸೆಟೆಸಿ
ಬೆನ್ನು ಲಟ ಲಟ ಮುರಿದು
ಸತ್ತು ಹೋಗಿದ್ದೇನೆ!
ಕನ್ನಡಿಯಲ್ಲಿ ಕಾಣುತ್ತಿರುವ
ಶವ ಕೊಳೆಯುತ್ತಿದೆ,
ದಯವಿಟ್ಟು ಸುಟ್ಟು ಹಾಕಿ.

5 comments:

  1. Loved it... reminds me of my old poem "Mukaa-Muki"
    http://www.nihaarikaa.blogspot.in/2008/02/blog-post_18.html

    ReplyDelete
  2. interesting...reveals a new dimension of thought..

    ReplyDelete
  3. ಹೊಸತರಹದ ಕವಿತೆ ಓದಿದೆ..ಖುಷಿಯಾಯ್ತು..ಬರಿತಾ ಇರಿ..
    ನಮಸ್ತೆ..

    ReplyDelete
  4. ಕಾಫ್ಕನ ಅಸ್ತಿತ್ವವಾದ ಇಲ್ಲಿ ಮೊಳೆತಿದೆ.. ಆದರೂ ದೇಹ ದಂಡಿಸೋದು ಈ ಪರಿ ಸರಿಯಲ್ಲ ಅಲ್ವಾ ಮಾರಾಯಾ...?

    ReplyDelete
  5. hmm...

    "ಕನ್ನಡಿಯಲ್ಲಿ ಕಾಣುತ್ತಿರುವ, ಶವ, ಕೊಳೆಯುತ್ತಿದೆ; ದಯವಿಟ್ಟು ಸುಟ್ಹಾಕಿ."

    ಚಿಕ್ಕದಾಗಿ, ಇಂಟೆನ್ಸೀವ್ ಆಗಿ ಇದ್ದು . ಚನ್ನಿದ್ದು.

    ReplyDelete