Pages

Wednesday, September 12, 2012

ಹೀಗೆರಡು ಚರಿತ್ರೆಗಳು




ನಾನು ಈಗ ತಾನೇ ಟಪ್ಪೆಂದು ಹೊಡೆದ
ಸೊಳ್ಳೆಯ ಜೀವನ ಚರಿತ್ರೆಯ ಬಗ್ಗೆ
ಆಲೋಚಿಸುತ್ತಾ ಕುಳಿತೆ:
ಗೋಡೆಯಿಂದ ಗೋಡೆಗೆ
ದಿಕ್ಕಿಲ್ಲದೇ ಓಡಿದ್ದು,
ಮೆಲ್ಲನೆ ಪಕ್ಕದವರ ರಕ್ತ ಹೀರಿ
ಹಸಿವು ನೀಗಿಸಿಕೊಂಡಿದ್ದು,
ಶಾಂತ ಕಿವಿಗಳಿಗೆ ಭಂಗ ತಂದಿದ್ದು,
ಬಣ್ಣ ಬಯಲಾಗುವಾಗ
ತನ್ನದೇ ಬಣ್ಣದ ಬಟ್ಟೆಗಳೊಡನೆ
ಅವಿತು ಕುಳಿತಿದ್ದು,
ನಿಂತ ನೀರಿನಲ್ಲಿ ಬದುಕಿ
ಸಂತಾನ ವೃದ್ಧಿಸಿದ್ದು,
ಹೊಲಸಿನಿಂದ ಹೊಲಸಿಗೆ ವಲಸೆಯಾಗಿದ್ದು,
ಸೊಳ್ಳೆಯ ಜೀವನ ಚರಿತ್ರೆ
ನನ್ನ ಆತ್ಮಕಥೆಯಂತಿದೆ!


1 comment:

  1. ನಿಮ್ಮ ಈ ಕವನ ತಿರುಮಲೇಶರ 'ನನ್ನ ಕಥೆ' ಎಂಬ ಇದರಷ್ಟೇ ಚಿಕ್ಕದಾದ ಕಾವ್ಯವನ್ನ ನೆನಪಿಗೆ ತಂದಿತು. ಅದು "ಕ್ವಿಕ್ಸೋಟನಾನಾಗಿ ಬಣ್ಣಬಣ್ಣದ ಉದ್ದ ಟೊಪ್ಪಿಗೆ ಧರಿಸಿ ಆಡಿದ್ದು, ಮೂರು ಬೀದಿಯ ಮಧ್ಯೆ ನಿಂತು ಸಾಕ್ರಟೀಸ್ ಮರೆತದ್ದು ನಾನು ಸಾರುವೆನೆಂದು ಬೊಗಳಿದ್ದು..." ಮುಂತಾಗಿ ಸಾಗುತ್ತದೆ. ಎರೆಡೂ ಹೋಲಿಕೆಯಾಗುತ್ತವೆಯಂತನಿಸಿತು.

    ReplyDelete