Pages

Saturday, December 17, 2011

ಸುತ್ತ ಶಾಯಿಯಿ ಗೆರೆಗಳು

ನಾನು ಹುಟ್ಟಿದಾಕ್ಷಣ ನನ್ನ
ಎತ್ತಿ ತೊಳೆದ ನರ್ಸು
ಯಾವ ಜಾತಿಯವಳಿದ್ದಳೋ?
ನಂತರ ಹುಟ್ಟಿದ್ದಿರಬೇಕು
ನನ್ನ ಜಾತಿ
ನಿಮ್ಮೆಲ್ಲ ಹೆಸರುಗಳ ಮೀರುತ್ತ
ಸೊಕ್ಕಿ ಬಂದಿತು ಹೆಸರು!

ಎದೆಯ ಬಿಗಿದಿರುವ
ಬಂಧನವಿದೆ, ಬಣ್ಣಗಳಿಲ್ಲ
ಹಲವು ವರುಷಗಳ ಹೊಲಸು!
ಎದೆಯ ಸೀಳುತ್ತಾ
ಹೃದಯದ ಮೇಲೆ
ಮೂರು ಗೆರೆಯೆಳೆಯುತ್ತಿದೆಯೇನೋ!

ಸತ್ತುಹೋದವರ ನೆರಳಲ್ಲಿ
ಕುಣಿವ ಅಕ್ಷರಗಳಿವೆ
ಪಠಿಸಿದಂತೆಲ್ಲ ಅಕ್ಷರಗಳ
ಇಂಕು ಹೊರಬಂದು
ನರ್ತಿಸಿ
ನೋಡು ನೋಡುತ್ತಲೇ
ಗೆರೆಗಳಾಗಿ ಸುತ್ತಲೂ
ಹರಿದುಬಿಟ್ಟವು!

ಚಿತ್ತುಕಲೆಗಳ ಗೆರೆಗಳು,
ಬರೆ ಬಿದ್ದ ಭಾವಗಳು!
ಅಬ್ಬ! ಸುಟ್ಟುಹೋಗಲಿ
ಈ ಜನಿವಾರ!
ನನ್ನ ನೀವೆಂದಾದರೂ
ಮನುಷ್ಯನೆಂದ ನೆನಪಿಲ್ಲ
ಕರೆಯಿರೊಮ್ಮೆ,
ನಾನು ಬ್ರಾಹ್ಮಣನಲ್ಲ!

11 comments:

  1. ಬಹುಷಃ ಪದಗಳ ಪ್ರಯೋಗ ತುಸು ಕಠಿಣವಾಯಿತೇನೋ ಎಂಬುದು ನನ್ನ ಭಾವನೆ...ಆದರೆ ಅದನ್ನೆಲ್ಲಾ ವಿಮರ್ಶಿಸುವಷ್ಟು ದೊಡ್ಡವನು ನಾನಲ್ಲ.. ಆಶಯವು ತುಂಬಾ ಉತ್ತಮವಾಗಿದೆ,ಮುಂದುವರೆಸಿ...ಚೆನ್ನಾಗಿದೆ.

    ಏನಾದರೂ ತಪ್ಪು ಮಾತಾಡಿದಲ್ಲಿ ಕ್ಷಮಿಸಿ,
    ಇತಿ ನಿಮ್ಮನೆ ಹುಡುಗ,
    ಚಿನ್ಮಯ ಭಟ್

    ReplyDelete
  2. ಚಿನ್ಮಯ್, ನಿಮಗನ್ನಿಸಿದ್ದನ್ನು ನೀವು ಹೇಳಿದ್ದೀರಷ್ಟೇ. ತಪ್ಪೇನಿದೆ? ಬಹುಶಃ ನಾವೆಲ್ಲ ಜಾತಿ ಪದ್ಧತಿಯನ್ನು ಬಿಟ್ಟು ದೂರ ಬಂದಿದ್ದೇವೆ. ಆದರೂ ಈ ಒಂದು ಐಡೆಂಟಿಟಿ ಉಳಿದಿದೆಯಲ್ಲಾ, ಸಿಟ್ಟು ತರಿಸುತ್ತದೆ. ಅದಕ್ಕೇ ಖಾರವಾಯಿತೆನೋ!

    ReplyDelete
  3. ನಾನು ಹುಟ್ಟಿದಾಕ್ಷಣ ನನ್ನ
    ಎತ್ತಿ ತೊಳೆದ ನರ್ಸು
    ಯಾವ ಜಾತಿಯವಳಿದ್ದಳೋ?
    ನಂತರ ಹುಟ್ಟಿದ್ದಿರಬೇಕು
    ನನ್ನ ಜಾತಿ

    ಹೌದು ಜಾತಿ ಮತಗಳೆಲ್ಲಾ ಆನಂತರ ಹುಟ್ಟಿದ್ದು , ತೋಟದ ಕೆಲಸಕ್ಕೆ ಬೇಕಾದ ಶೂದ್ರ , ಆಮೇಲೆ ಅಸ್ಪ್ರಶ್ಯನಾಗುತ್ತಾನೆ.... ಆದರೆ ಈಗ ಆ ಸ್ಥಿತಿ ಇಲ್ಲ . ಕಠಿಣವಾದ ಪದಗಳ ಉಪಯೋಗದ ಅವಶ್ಯಕತೆ ಇರಲಿಲ್ಲ ಅನಿಸುತ್ತಿದೆ,,, ಆಶಯವು ತುಂಬಾ ಚೆನ್ನಾಗಿ ಮುಡಿ ಬಂದಿದೆ... ಮೇಲಿನ ಸಾಲುಗಳು ಇಷ್ಟವಾದವು...ಚೆನ್ನಾಗಿದೆ, ಮುಂದುವರೆಸಿ...

    ReplyDelete
  4. " ಬಹುಶಃ ನಾವೆಲ್ಲ ಜಾತಿ ಪದ್ಧತಿಯನ್ನು ಬಿಟ್ಟು ದೂರ ಬಂದಿದ್ದೇವೆ" ಅಂದರೆ, ನಾವು ವಿದ್ಯಾರ್ಥಿಗಳು ಅಂತ. ನಮ್ಮ ಹಳ್ಳಿಗಳಲ್ಲಿ, ಪಟ್ಟಣಗಳಲ್ಲೂ ನಡೆಯುವ ಮದುವೆಗಳಲ್ಲಿ ಜಾತಿ ಕುಣಿದಾಡುತ್ತಿರುವುದು ನಿಚ್ಚಳ. ಈಗ ತುಳಿತಕ್ಕೊಳಗಾಗುವರು ಎಂದೇನೂ ಇಲ್ಲ. ಏಕೆಂದರೆ ಕಾಯಿದೆಗಳಿವೆ. ಹಾಗಾಗಿ ಯಾರೂ ಮಾತಾಡುತ್ತಿಲ್ಲ. ಆದರೆ ಬೇಲಿಗಳಿವೆ, ಗುಪ್ತವಾಗಿ, ಸುಪ್ತವಾಗಿ. ಹಾಗಾಗಿ ನಾವು ಬರೆಯುವವರು ಕ್ರೋಧ ವ್ಯಕ್ತಪಡಿಸಬೇಕಾದ್ದು ಸಹಜ. ಏಕೆಂದರೆ ನಮಗೆ ಪ್ರೀತಿ ಬಲುಮುಖ್ಯ. ಸಾಮಾಜಿಕ ತೋರಿಕೆ, ಸಭ್ಯತೆಗಳಿಗಿಂತಲೂ.

    ReplyDelete
  5. ಬ್ರಾಹ್ಮಣ್ಯದ ಮೇಲೆ ಈ ಪರಿ ವಿರೋಧವೇತಕೆ.. ಮನುಜ ಸಂಬಂದದಿ ಇದೆಲ್ಲವೂ ಸಹಜವಾದುದೆ.. ಯು.ಆರ್.ಎ, ಸಂಸ್ಕಾರ ದಲ್ಲಿ ನಾರಣಪ್ಪನ ಪಾತ್ರ ಮೊದಲ ಪುಟದಲ್ಲೇ ಸತ್ತರೂ ಕೊನೆಯವರೆವಿಗೂ ಜೀವಂತವಾಗಿರುತ್ತದೆ, ಅಂತೆಯೇ ಜಾತಿಯೂ ಕೂಡ.. ಅಲ್ಲಿ ಒಂದು ಮಾತು ಬರುತ್ತದೆ “ ನಾರಣಪ್ಪ ಜಾತಿ ಬಿಟ್ಟರೂ ಜಾತಿ ಅವನನ್ನು ಬಿಡಲೊಲ್ಲದು“.. ಅದೆನೇ ಇರಲಿ ಕವಿತೆ ಅರ್ಥವತ್ತಾಗಿ ಮೂಡಿದೆ.. ನಿನ್ನ ಹಳೆಯ ರಮ್ಯ ಕವಿತೆಗಳಿಗೆ ಇದು ಎದುರಾಗಿ ನಿಂತಿದೆ.. ಈ ಕವಿತೆಯ ಪ್ರತಿ ‘ಪ್ಯಾರ‘ ವನ್ನು ಹಿಂದು ಮುಂದು ಮಾಡಿ ಓದಿದೆ.. ಅಬ್ಬ ಅನಂತ ಅರ್ಥಗಳು...!!!
    ಧನ್ಯವಾದಗಳು.

    ReplyDelete
  6. "bere jaathiyaddarinda maduveyagabeda","namma mane munde baralu hinjariyuttidda avarella olage baruvantayitu" endu dina gonaguva manassugaliruva samaajadalli ee teekshna padagalu agathyave.... arthavatthagide anna..:)

    ReplyDelete
  7. ನಿಮ್ಮೆಲ್ಲ ಹೆಸರುಗಳ ಮೀರುತ್ತ
    ಸೊಕ್ಕಿ ಬಂದಿತು ಹೆಸರು!

    super ..

    ReplyDelete