Pages

Tuesday, November 22, 2011

ಬಣ್ಣಗಳ ಸಂತೆ




ಬರೆದ ಅಕ್ಷರಗಳೆಲ್ಲ
ನೀರಿಳಿದು ಒರೆಸಿ ಹೋದ ಮೇಲೆ,
ಹೇಗೆ ಹಾಡಲಿ ಮತ್ತೆ...?
ಯಾರು ಓದಿಯಾರು ಈ
ಅರ್ಧ ವದ್ದೆಯಾದ ಪತ್ರಗಳ?
ಕೈಯಾಚೆ ನೆನಪುಗಳು
ಸರಿದು ಹೋಗುತ್ತಿವೆ...!
ನಾನು ಬತ್ತಲಾಗಲಿಲ್ಲ,
ಬರಿಯ ಬಟ್ಟೆಯಾದೆ;
ಬಟ್ಟೆ ಅಂಗಡಿಯಲ್ಲಿರುವ
ಪೊಳ್ಳು ಬೊಂಬೆ!
ಬರಿಯ
ಬಣ್ಣಗಳ ಸಂತೆ!

4 comments:

  1. ಚೆನ್ನಾಗಿದ್ದು. ಹೊಸತಾಗಿ ಬರೀತಾ ಇರೋದಾದ್ರೆ:.. ಒಳ್ಳೇ ಪ್ರಯತ್ನ.ಹಿಂಗೇ ಬರೀತಾ ಇರಿ :-)
    ಮುಂಚಿಂದಾನೂ ಬರೀತಾ ಇದ್ದಿದ್ದಾದ್ರೆ: ಕವನದಲ್ಲಿ ಇನ್ನೂ ಸ್ವಲ್ಪ ಇರ್ಲಕ್ಕಿತ್ತು ಅನಿಸ್ತಾ ಇದ್ದು. ಹೇಳದನ್ನ ಕಮ್ಮಿ ಪದದಲ್ಲಿ ಹೇಳಕ್ಕು ಹೇಳ ಪ್ರಯತ್ನ ಒಳ್ಳೇದೇ.ಆದರೆ ಸರಿ ಮುಟ್ಟತಾ ಇಲ್ಲೆ ಅನಿಸ್ತು :-)

    ReplyDelete
  2. ಬಹಳ ಕಾಲ ಆತು ಬರೆಯಲ್ ಹಣಕಿ. ಬ್ಲಾಗಿನ ಹಳೆಯ ಕವಿತೆಗಳನ್ನೋದಿ. ಹೊಸ ಶೈಲಿಗೆ ಹೋಗುವ ಪ್ರಯತ್ನ ನಡಿತಾ ಇದ್ದು. ಅದಕ್ಕೇ ಇದೆಲ್ಲಾ. ಇನ್ನೂ ಸಾಲುಗಳನ್ನು ಬರೆದರೆ ಹೇಳುವದೆಲ್ಲವನ್ನು ಪೂರ್ತಿ ಅರ್ಥೈಸಿಕೊಳ್ಳುವ ಹಾಗೆ ಮಾಡ್ಲಕ್ಕು. ಆದ್ರೆ ಆಗ ಅದು ನಿಮ್ಮ ಅರ್ಥ ಆಗ್ತಿಲ್ಲೆ. ನನ್ನ ಅರ್ಥ ಆಗ್ತು. ಪ್ರತಿಕ್ರಿಯೆಗಾಗಿ ಧನ್ಯವಾದ.

    ReplyDelete
  3. ಆತ್ಮೀಯ ಸುಬ್ಬು,
    ನಿನ್ನ ಈ ಕವನ ಮುಖ್ಯಬವಾಗಿ ಖುಷಿ ನೀಡುತ್ತಿದೆ. ಕಾವ್ಯದ ಬಗೆಗೆ ನಾವು ನಿಜಕ್ಕೂ ಬರೆಯಬೇಕೆ ಎಂಬುದು ಸದಾ ನನ್ನ ಕಾಡುವ ಪ್ರಶ್ನೆ ಹಾಗು ಸದ್ಯದವರೆಗಿನ ಉತ್ತರವೂ ಕಾವ್ಯ್ದದ ಬಗೆಗೆ ಬರಹ ವ್ಯರ್ಥ ಎಂಬುದೇ ಆಗಿದೆ. ಕಾವ್ಯ ಸ್ವತಂತ್ರ್ಯ ವ್ಯಕ್ತಿತ್ವ ಉಳ್ಳ ವಸ್ತು. ಅದು ಕಾವ್ಯ ರಸಿಕನೊಳಗೆ ತನ್ನ ತಾನೆ ಬಗೆದುಕೊಳ್ಳುತ್ತೆ. ಯಾವುದೇ ಕಾವ್ಯವೂ ಹೃದಯಕ್ಕೆ ತಟ್ಟದೇ ಹೋದರೆ ಅದು ವ್ಯರ್ಥವೇ ಸರಿ, ಈ ಪರಿಯಲ್ಲಿ ಹೇಳುವುದಾದರೆ ನಿನ್ನ ಈ ಕಾವ್ಯ ಹೃದಯಕ್ಕೆ ಒಂದು ಕ್ಷಣ ತಟ್ಟುವುದಂತೂ ಸತ್ಯ. ಒಬ್ಬ ಗೆಳೆಯನಾಗಿ ಒಂದು ಮಾತನ್ನ ಹೇಳಲು ಇಚ್ಚಿಸುತ್ತೇನೆ, "ದೊಡ್ಡದು ಎಂಬೋದು ದೊಡ್ರೋಗ" ಶ್ರೇಷ್ಟತೆ ಒಂದು ವ್ಯಸನವೇ ಸರಿ. ಆದ್ದರಿಂದ ಪ್ರತಿ ಕವನವೂ ಪ್ರತಿ ಪದವೂ ಯಾವುದೋ ಹಂತದಲ್ಲಿ ಮುಖ್ಯವಾಗಿ ಉಳಿದುಬಿಡುತ್ತದೆ. ಅಡಿಗರ ಭೂಮಿಗೀತ ಎಷ್ಟು ಮಹತ್ವದ ಕೃತಿಯೋ, ರಾಜರತ್ನಂ ರವರ "ನಾಯಿ ಮರಿ" ಕವಿತೆ ಕೂಡ ಅಷ್ಟೇ ಮಹತ್ವದ್ದು. ಪ್ರತಿಯೊಂದು ಒಂದೊಂದು ಬದುಕಿನ ರೂಪಗಳನ್ನ ತೆರೆದಿಡುತ್ತೆ ಅಷ್ಟೆ.
    ಉತ್ತಮ ಪ್ರಯತ್ನ. ಶುಭವಾಗಲಿ. ದಯವಿಟ್ಟು ಬರೆಯುತ್ತಿರಿ.

    ReplyDelete
  4. ನಾನು ಬತ್ತಲಾಗಲಿಲ್ಲ,
    ಬರಿಯ ಬಟ್ಟೆಯಾದೆ;... ಚೆಂದದ ಸಾಲು...

    ಹೊಸ ಶೈಲಿ ಚೆನ್ನಾಗಿದೆ...

    ReplyDelete