Pages

Saturday, November 5, 2011

ಭೂಮಿಗೆ ಭಾರ!?!

ಇಟ್ಟ ಹೆಜ್ಜೆಗಳೆಲ್ಲ
ಅನಾಥ! ಅರ್ಥಗಳೆಲ್ಲಿ?
ತೋರಣ ಕಟ್ಟಿ ಉಳಿದ ಹೂವುಗಳು,
ಯಾರೂ ಮೂಸದೆಯೇ ಬಾಡಿ ಹೋದವು!
ಯಾರೂ ಕೇಳದ ಮೌನ, ದೂರಹೊರಟಿತು!
ಪುಟ್ಟ ಮಗುವೊಂದರ ಮುಖದಲ್ಲಿ
ತುಂಬು ನಗೆ!
ವ್ಯಕ್ತ, ಅವ್ಯಕ್ತಗಳು
ಪದಗಳಾಗದೇ ಹಾರುತ್ತಿವೆ,
ಕಾಲದ ಹಕ್ಕಿಯ ಬೆನ್ನೇರಿ!
ಖಾಲಿ ಕೈಯಲ್ಲಿ ಹಿಡಿದಿಟ್ಟ ನಿರೀಕ್ಷೆ,
ಸುಪ್ತ!
ಮುಂದಡಿ ಇಟ್ಟರೆ
ಇಟ್ಟ ಹೆಜ್ಜೆಗಳೆಲ್ಲ ...!
ನಿಮ್ಮ ಕಣ್ಣುಗಳಲ್ಲಿನ ಭೂಮಿಗೆ
ಮತ್ತಷ್ಟು ಭಾರ!
ಹಾ! ಮೊಗೆದಷ್ಟು ಬದುಕು!





3 comments:

  1. >>"ವ್ಯಕ್ತ, ಅವ್ಯಕ್ತಗಳು
    ಪದಗಳಾಗದೇ ಹಾರುತ್ತಿವೆ,"<<
    ಅಬ್ಬಾ.. ಎಷ್ಟು ಚೆನ್ನಾಗಿದ್ದು..
    ಕವಿತೆಯೂ ಚೆನ್ನಾಗಿದ್ದು .. :-)

    ReplyDelete
  2. ninna kanasugalella toranada hoovagali... mouna maatiginta ghadavagi hrudayagala talupali... bogaseya tumba nireeksheya badukirali..:-);-)

    ReplyDelete